ದೊಡ್ಡ ಕಂಪನಿಗಳಿಗೆ ಸೆಡ್ಡುಹೊಡೆಯುವಂತಿದೆ ನಮ್ಮ ಕನ್ನಡಿಗ ತಯಾರಿಸಿದ ಈ ವಾಹನ

ದಿನೇ ದಿನೇ ನವೀಕರಿಸಲಾಗದ ಶಕ್ತಿ ಮೂಲಗಳು ಕಡಿಮೆಯಾಗುತ್ತಲೇ ಇವೆ ಈ ಕಾರಣ ನವೀಕರಿಸಬಹುದಾದ ಶಕ್ತಿ ಇಂದಿನ ಜಗತ್ತಿನಲ್ಲಿ ಮಹತ್ವ ಹೆಚ್ಚಾಗಿದೆ.

ಇಂತಹ ಒಂದು ಸನ್ನಿವೇಶದಲ್ಲಿ, ನವೀಕರಿಸಲಾಗದ ಮೂಲ ಶಕ್ತಿಯನ್ನು ಅಂದರೆ ಪೆಟ್ರೋಲ್ ಡೀಸೆಲ್ ರೀತಿಯ ಇಂದನವನ್ನು ಉಳಿಸಲು ಸೌರ ವಾಹನವು ಪರಿಹಾರವಾಗಿದೆ.

ಇದರ ಬೆನ್ನಲ್ಲೇ 'ಗೋ ಗ್ರೀನ್ ಗ್ಲೋ ಗ್ರೀನ್' ಎಂದು ಕರೆಯಲ್ಪಡುವ ನವೀನ ಎರಡು ಆಸನ-ಮೂರು-ಚಕ್ರಗಳ ಸೌರ ವಾಹನವನ್ನು  ಬೆಂಗಳೂರಿನಲ್ಲಿ ಅಲ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಬೈರೆ ಗೌಡಅವರು ಅಭಿವೃದ್ಧಿಪಡಿಸಿದ್ದರೆ.

ವಾಹನದ ಲಿಥಿಯಂ ಬ್ಯಾಟರಿಯನ್ನು ವಾಹನದ ಮೇಲೆ ಅಳವಡಿಸಿರುವ ಸೌರ ಫಲಕದೊಂದಿಗೆ ಮೂರು ಅಥವಾ ನಾಲ್ಕು ಗಂಟೆಗಳಲ್ಲಿ  ಚಾರ್ಜ್ ಮಾಡಬಹುದಾಗಿದೆ.

ಅದಲ್ಲದೆ ಈ ವಾಹನವನ್ನು ವಿದ್ಯುತ್ ನಿಂದಲು ಕೇವಲ 90 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದೆ.

ಇನ್ನು ಈ ವಾಹನವು ಒಂದೇ ಪ್ರಯಾಣಿಕರೊಂದಿಗೆ 70-80 ಕಿಮೀ ಮೈಲೇಜ್ ಮತ್ತು 45 ಕಿಮೀ / ಗಂ ವೇಗವನ್ನು ಪಡೆಯಬಲ್ಲದು. ಎರಡು ಪ್ರಯಾಣಿಕರು ಇದ್ದರೆ, ಮೈಲೇಜ್ 65-70 ಕಿ.ಮೀ ಮತ್ತು ವೇಗ 38 ಕಿಮೀ / ಗಂ ಪಡೆಯಬಲ್ಲದು.

ವಾಹನದ ಅನುಕೂಲಗಳು 

  • ಈ ವಾಹನವು ಪರಿಸರ ಸ್ನೇಹಿಯಾಗಿದೆ
  • ನಗರಗಳು ಮತ್ತು ಪಟ್ಟಣಗಳಿಗೆ ಸೂಕ್ತವಾಗಿದೆ 
  • ಶಬ್ದ ಮಾಲಿನ್ಯ ಇಲ್ಲ 
  • ಕಡಿಮೆ ಪಾರ್ಕಿಂಗ್ ಪ್ರದೇಶದ ಅಗತ್ಯವಿದೆ 
  • ಕಾಂಪ್ಯಾಕ್ಟ್ ಮತ್ತು ಹೊಂದಿಕೊಳ್ಳುವ ವಿನ್ಯಾಸ 
  • ಸಂಚಾರ ವಲಯಗಳಲ್ಲಿ ಹೆಚ್ಚು ಆದ್ಯತೆ 
  • ಇದು ಶೂನ್ಯ ಹೊರಸೂಸುವಿಕೆ ಮಟ್ಟವನ್ನು ಹೊಂದಿರುತ್ತದೆ ಮತ್ತು CO2, CO, NOX ನಂತಹ ಮಾಲಿನ್ಯಕಾರಕಗಳಿಲ್ಲ 
  • ವಾಹನದ ಒಟ್ಟಾರೆ ವೆಚ್ಚ 1,48,000 ರೂ. ,  ಅಧಿಕ ಸ೦ಖ್ಯೆಯ ಉತ್ಪಾದನೆಗಾಗಿ ವೆಚ್ಚವು 75,000 ದಿಂದ 80,000 ರವರೆಗೆ ತಗುಲಬಹುದು.

188 Comments

Leave a comment