2022ರ ಮಿಷನ್ ಗಾಗಿ ಬಾಹ್ಯಾಕಾಶದ ಸೂಟ್ ಅನಾವರಣ ಗೊಳಿಸಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಂಸ್ಥೆಯು ಅಭಿವೃದ್ಧಿಪಡಿಸಿದ ಬಾಹ್ಯಾಕಾಶದ ಸೂಟ್ ಅನ್ನು  ಪ್ರದರ್ಶಿಸಿದೆ. ಆರನೇ ಬೆಂಗಳೂರು ಬಾಹ್ಯಾಕಾಶ ಎಕ್ಸ್ಪೋ ದಲ್ಲಿ ಈ ಸೂಟ್ಅನ್ನು ಪ್ರದರ್ಶಿಸಲಾಯಿತು.

ಕಿತ್ತಳೆ ಬಣ್ಣದ ಈ ಸೂಟ್ ಅನ್ನು ಕಳೆದ ಎರಡು ವರ್ಷಗಳಿಂದ ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈ ಸೂಟ್ ನಲ್ಲಿ ಒಂದು ಆಮ್ಲಜನಕದ ಸಿಲಿಂಡರ್ ಅನ್ನು ಹಿಡಿದಿಟ್ಟುಕೊಂಡು, 60 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಉಸಿರಾಡಲು ಅವಕಾಶ ಮಾಡಿಕೊಡುತ್ತದೆ.

ಸದ್ಯಕ್ಕೆ ಇಸ್ರೋ ಕೇವಲ ಎರಡು ಸೂಟ್ಗಳನ್ನು ಅಭಿವೃದ್ಧಿಪಡಿಸಿದೆ, 

 2022 ರ ಹೊತ್ತಿಗೆ ಭಾರತೀಯ ಬಾಹ್ಯಾಕಾಶ ನೌಕೆಯಲ್ಲಿ ಮೂರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಿಷನ್ ಇದಾಗಿದೆ. ಇದು ಯಶಸ್ವಿಯಾದಲ್ಲಿ ಅಮೇರಿಕಾ ರಷ್ಯಾ ಮತ್ತು ಚೀನಾ ನಂತರ ಈ ಸಾಧನೆಯನ್ನು ಮಾಡಿದ   ವಿಶ್ವದ 4 ನೇ ದೇಶವಾಗಲಿದೆ .

108 Comments

Leave a comment