ಈ ಕ್ಯಾಮರಾದಲ್ಲಿ ಬೆಳಕಿನ ಚಲನೆಯನ್ನೇ ಸೆರೆ ಹಿಡಿಯಬಹುದು

ನಮಗೆಲ್ಲ ಗೊತ್ತೇ ಇದೆ ಬೆಳಕು ಪ್ರತಿ ಸೆಕೆಂಡಿಗೆ ಸುಮಾರು 3 ಲಕ್ಷ ಕಿಲೋಮೀಟರು ವೇಗದಲ್ಲಿ ಚಲಿಸುತ್ತದೆ ಅದಕ್ಕಿಂತ ವೇಗವಾಗಿ ಬೇರೆ ಯಾವ ವಸ್ತುವು ಚಲಿಸುವುದಿಲ್ಲ. ಆದರೆ ಇದೀಗ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕ್ವಿಬೆಕ್ ಯೂನಿವರ್ಸಿಟಿ ವಿಜ್ಞಾನಿಗಳು ವಿಶ್ವದ ವೇಗದ ಕ್ಯಾಮೆರಾವನ್ನು ತಯಾರಿಸಿದ್ದಾರೆ ಇದು ಪ್ರತಿ ಸೆಕೆಂಡಿಗೆ 10 ಟ್ರಿಲಿಯನ್ ಬಾರಿ ಫೋಟೋ ಕ್ಲಿಕ್ಕಿಸಬಲ್ಲದು.

ಇದು ಬೆಳಕಿಗಿಂತ ವೇಗವಾಗಿ ಫೋಟೋವನ್ನು ತೆಗೆಯಬಲ್ಲದು ಅಂದರೆ ಬೆಳಕಿನ ಚಲನೆಯನ್ನು ಸಹ ಇದರಲ್ಲಿ ನಾವು ವೀಕ್ಷಿಸಬಹುದು. ಈ ಕ್ಯಾಮೆರಾ ಸಂಕುಚಿತ ಅಲ್ಟ್ರಾಫಾಸ್ಟ್ ಛಾಯಾಗ್ರಹಣ ಎಂಬ ವಿಧಾನವನ್ನು ಬಳಸಿ ವಿಡಿಯೋವನ್ನು ಸೆರೆ ಹಿಡಿಯುತ್ತದೆ.

ಬೆಳಕಿಂದ ಚಲನೆಯನ್ನು ಈ ಕೆಳಗಿನ ಫೋಟೋದಲ್ಲಿ ನೋಡಬಹುದು 

88 Comments

Leave a comment