ಅಮೆಜಾನ್ ನಲ್ಲಿ ಒನ್ ಪ್ಲಸ್ 6ನ ಬೆಲೆಯಲ್ಲಿ ಬಾರಿ ಖಡಿತ

ಅಮೋನ್ ಇಂಡಿಯಾ ಅಕ್ಟೋಬರ್ 10 ರಿಂದ 15 ರ ವರೆಗೆ "ಗ್ರೇಟ್ ಇಂಡಿಯನ್ ಫೆಸ್ಟಿವಲ್" ಮಾರಾಟಕ್ಕಾಗಿ ವ್ಯಾಪಕ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಜನಪ್ರಿಯವಾದ ಒನ್ ಪ್ಲಸ್ 6 ಫೋನಿನ ಮೇಲೆ ₹ 5000 /-  ರಷ್ಟು ಬೃಹತ್ ಬೆಲೆಯ ಕಡಿತವನ್ನು ಅಮೆಜಾನ್ ನೀಡುತ್ತಿದೆ. ₹34,999 /- ಈ ಫೋನಿನ ಮೇಲೆ ಇದೀಗ  ₹29,999 / - ಗೆ ಇಳಿಸಲಾಗುತ್ತಿದೆ ! ಇದರ ಜೊತೆಗೆ SBI ಕ್ರೆಡಿಟ್ / ಡೆಬಿಟ್ ಕಾರ್ಡ್ಗಳನ್ನು ಬಳಸುವುದರೊಂದಿಗೆ ಅಮೆಜಾನ್ 10% ಹೆಚ್ಚುವರಿ ರಿಯಾಯಿತಿಗಳನ್ನು ನೀಡುತ್ತಿದ್ದು ಹೆಚ್ಚುವರಿ ₹3000 ಕಡಿತ ಗೊಂಡರೆ ₹27000 ಕ್ಕೆ ಈ ಫೋನ್ ಕೊಳ್ಳಬಹುದಾಗಿದೆ ಮತ್ತು ನಿಮ್ಮ ಹಳೆಯ ಸ್ಮಾರ್ಟ್ಫೋನ್ಗಳನ್ನು ಸಹ ಬದಲಾಯಿಸಿಕೊಂಡು ಈ ಫೋನನ್ನು ಕೊಳ್ಳಬಹುದು. 

ಒನ್ ಪ್ಲಸ್ 6 ಸದ್ಯ ಮಾರುಕಟ್ಟೆಯಲ್ಲಿ ಇರುವ ಒಂದು ಉತ್ತಮವಾದ ಫೋನ್ ಆಗಿದೆ.  6.28 "AMOLED ಸ್ಕ್ರೀನ್, ಸ್ನಾಪ್ಡ್ರಾಗನ್ 845 soc, RAM ನ 6/8 GB, 16 + 20 MP ಡ್ಯುಯಲ್ ಕ್ಯಾಮೆರಾ, ಮುಂದೆ 16 MP ಸೆಲ್ಫಿ ಕ್ಯಾಮರಾ  ಮತ್ತು  3300 mAh ಬ್ಯಾಟರಿ ಸಹ ಇದರಲ್ಲಿದೆ ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 9.0 OS (ಪೈ) ಒಳಗೊಂಡಿದೆ.  ಇದಲ್ಲದೆ ಒನ್ ಪ್ಲಸ್  ಹೊಸದಾದ ಒನ್ ಪ್ಲಸ್ 6T ಫೋನನ್ನು ಅಕ್ಟೋಬರ್ 17 ರಂದು ಬಿಡುಗಡೆ ಮಾಡುತ್ತಿದ್ದು,  ಇದು ಸುಮಾರು 38,000 ರೂ. / - ಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

00 Comments

Leave a comment