ಗೂಗಲ್ ಇಂಡಿಯಾದ ಈ ಕ್ಯಾಂಪೇನ್ ನಿಮ್ಮ ಆಂಡ್ರಾಯ್ಡ್ ಡಿವೈಸ್ ಗಳು ಹ್ಯಾಕ್ ಆಗದಂತೆ ನೋಡಿಕೊಳ್ಳುತ್ತದೆ

ಇಂಟರ್ನೆಟ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಯುವಕರು ಮತ್ತು ಮೊದಲ-ಬಾರಿ ವೆಬ್ ಬಳಸುವವರು ತಮ್ಮ ಅಕೌಂಟ್ ಹೈಜ್ಯಾಕ್ ಆಗದಂತೆ ನೋಡಿಕೊಳ್ಳಲು, ದುರುದ್ದೇಶಪೂರಿತ ಅಪ್ಲಿಕೇಶನ್ಗಳಿಂದ ಆಂಡ್ರಾಯ್ಡ್ ಸಾಧನಗಳನ್ನು ರಕ್ಷಿಸಿ, ಡಿವೈಸ್ ಕಳೆದುಹೋದರೆ ಅದರಲ್ಲಿರುವ ಎಲ್ಲ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಗೂಗಲ್ ಇಂಡಿಯಾ ಸೋಮವಾರ "#SecurityCheckKiya" ಎಂಬ ಸಾರ್ವಜನಿಕ ಮುಂದಾಳ್ತನವೊಂದನ್ನು ಪ್ರಾರಂಭಿಸಿತು.

ತಾಂತ್ರಿಕ ಸಾಕ್ಷರತೆಯ ಕೊರತೆಯಿರುವ ಭಾರತೀಯ ಈಗ ಸುಲಭವಾಗಿ ಲಭ್ಯವಿರುವ ವಿಧಾನಗಳ ಮೂಲಕ ಇಂಟರ್ನೆಟ್ ನಲ್ಲಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಹಾಕುತ್ತಾರೆ ಮತ್ತು ವೆಬ್ ನಲ್ಲಿ ನಿತ್ಯ ನಡೆಯುವ ಹ್ಯಾಕಿಂಗ್ ಅನ್ನು ಎದುರಿಸುತ್ತಿದ್ದಾರೆ ಎಂದು ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಫೆಬ್ರವರಿ 6 ರಂದು ಆಚರಿಸಲಾಗುವ ಸುರಕ್ಷಿತ ಇಂಟರ್ನೆಟ್ ದಿನದಲ್ಲಿ ಸುರಕ್ಷತಾ ಪರಿಶೀಲನೆಯ ಮೊದಲ ಹಂತವನ್ನು ತೆಗೆದುಕೊಳ್ಳಲು ಬಳಕೆದಾರರನ್ನು ಪ್ರೋತ್ಸಾಹಿಸುವ ಮೂಲಕ ಗೂಗಲ್ ಮಾಹಿತಿಯನ್ನು www.google.co.in ಮುಖಪುಟದಲ್ಲಿ ಲಭ್ಯವಾಗುವಂತೆ ಮಾಡಿದೆ. ಜನರು ವೆಬ್ನಲ್ಲಿ ಸುರಕ್ಷಿತವಾಗಿರಲು ಮೂರು ಹಂತದ ವೆರಿಫಿಕೇಶನ್ ಕ್ರಮವನ್ನು ಅನುಸರಿಸಬಹುದು.

ಅಕೌಂಟುಗಳು ಹೈಜ್ಯಾಕ್ ಆಗದಂತೆ ನೋಡಿಕೊಳ್ಳಲು, ಎಲ್ಲಾ ಆಂಡ್ರಾಯ್ಡ್ ಡಿವೈಸ್ ಗಳು ಮತ್ತು ಜೀಮೇಲ್ ಬಳಕೆದಾರರು ತಮ್ಮ ಸೆಕ್ಯುರಿಟಿ ಸೆಟ್ಟಿಂಗ್ಗಳನ್ನು ಮತ್ತು ಗೂಗಲ್ ಖಾತೆಯ ಆಕ್ಟಿವಿಟಿಯನ್ನು "ಗೂಗಲ್ ಸೆಕ್ಯುರಿಟಿ"ಯಲ್ಲಿ ಒಂದು ಕ್ಲಿಕ್ಕಿನಲ್ಲಿ ಪರಿಶೀಲಿಸಬಹುದು. ಇದು ಯಾವುದೇ ಅಟ್ಯಾಕ್ ಗಳನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುತ್ತದೆ ಮತ್ತು ಬಳಕೆದಾರರಿಗೆ ತಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಮಾರ್ಗದರ್ಶನ ನೀಡುತ್ತದೆ.

ದುರುದ್ದೇಶಪೂರಿತ ಅಪ್ಲಿಕೇಶನ್ಗಳಿಂದ ಆಂಡ್ರಾಯ್ಡ್ ಸಾಧನಗಳನ್ನು ರಕ್ಷಿಸಲು, ಬಳಕೆದಾರರು ಗೂಗಲ್ ಪ್ಲೇ ಪ್ರೊಟೆಕ್ಟ್ ಮೂಲಕ ಯಾವುದೇ ಹಾನಿಕಾರಕ ಅಪ್ಲಿಕೇಶನ್ಗಳಿಗಾಗಿ ಆಂಡ್ರಾಯ್ಡ್ ಸಾಧನವನ್ನು ಸ್ಕ್ಯಾನ್ ಮಾಡಬಹುದು ಮತ್ತು ಪರಿಶೀಲಿಸಬಹುದು. ಗೂಗಲ್ ಪ್ಲೇ ಪ್ರೊಟೆಕ್ಟ್ ಮಾಲ್ವೇರ್ಗಾಗಿ ಎಲ್ಲಾ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡುವ ಮೊದಲು ಮತ್ತು ನಂತರ ಸ್ಕ್ಯಾನ್ ಮಾಡುತ್ತದೆ.

 

ಆಂಡ್ರಾಯ್ಡ್ ಡಿವೈಸ್ ಕಳೆದು ಹೋದಲ್ಲಿ, ಎಲ್ಲಾ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಲು, ಬಳಕೆದಾರರು "ಫೈಂಡ್ ಮೈ ಫೋನ್" ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು ಮತ್ತು ಅದು ಕಳೆದುಹೋದ ಆಂಡ್ರಾಯ್ಡ್ ಡಿವೈಸನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಡಿವೈಸ್ ಮತ್ತು ಅದರ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ.

00 Comments

Leave a comment