5G ಮಾತು 4G ವಿಸ್ತರಣೆಗಾಗಿ ಮುಂದಿನ 3 ವರ್ಷಗಳಲ್ಲಿ ಏರ್ಟೆಲ್ $8 ಬಿಲಿಯನ್ ಖರ್ಚು ಮಾಡುವ ಸಾಧ್ಯತೆ

ರಾಜೀವ್ ಶರ್ಮಾ, SBI ಕ್ಯಾಪ್ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಸಹ-ಮುಖ್ಯಸ್ಥರ ಪ್ರಕಾರ ಆಯ್ದ ಸ್ಥಳಗಳಲ್ಲಿ  5G ಬಿಡುಗಡೆಗಾಗಿ ಭಾರತಿ ಏರ್‌ಟೆಲ್ ಮೊದಲ ಮೂರು ವರ್ಷಗಳಲ್ಲಿ $5 ಬಿಲಿಯನ್ (35,000 ಕೋಟಿ ರೂ.) ಹೂಡಿಕೆ ಮಾಡಬೇಕಾಗುತ್ತದೆ ಮತ್ತು 4G ವಿಸ್ತರಣೆಗಾಗಿ ಹೆಚ್ಚುವರಿ $3 ಬಿಲಿಯನ್ (ರೂ. 21,000 ಕೋಟಿ) ಹೂಡಿಕೆ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈ ಹೂಡಿಕೆಗಾಗಿ ಮೊಬೈಲ್ ಪ್ಲಾನ್ ಗಳ ಬೆಲೆಯನ್ನು ಮೇಲ್ಮುಖವಾಗಿ ಪರಿಷ್ಕರಿಸಬೇಕಾಗುತ್ತದೆ. ಈ ಕಾರಣ ಪ್ಲಾನ್ ಗಳ ಬೆಲೆಯನ್ನು ಏರ್ಟೆಲ್ ಹೆಚ್ಚಿಸಬೇಕಾಗುತ್ತದೆ.

ಇದು ಏರ್ಟೆಲ್ ಗೆ ದೊಡ್ಡ ಸವಾಲಾಗಿದೆ ಎಂದು ಹೇಳಲಾಗಿದೆ.

"ಭಾರತಿ ಏರ್ಟೆಲ್ ಸದ್ಯಕ್ಕೆ ಮೊಬೈಲ್ ಸುಂಕವನ್ನು ಏರಿಕೆ ಮಾಡುವ ಸ್ಥಿತಿಯಲ್ಲಿ ಇಲ್ಲ  ಮತ್ತು ಮೊಬೈಲ್ ಬೆಲೆಗಳಲ್ಲಿ  ಏರಿಕೆ ಕನಿಷ್ಠ ಮುಂದಿನ 6 ರಿಂದ 9 ತಿಂಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ"

ಹೊಸ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಸೋಮವಾರದಂದು ದೇಶದಲ್ಲಿ 4G ಮತ್ತು 5G ಬ್ಯಾಂಡ್ 2019 ರಲ್ಲಿ ಹರಾಜು ಮಾಡಲಿದ್ದಾರೆ. ಏರ್ಟೆಲ್ ಕಂಪನಿಯು 5G ಬ್ಯಾಂಡ್ ಬೆಲೆಗಳು ಕಡಿಮೆಯಾದರೆ ಮಾತ್ರ ಖರೀದಿಸಲಿದೆ ಎಂದು ಹೇಳಿದೆ.

ಜನವರಿ-ಮಾರ್ಚ್ ಅವಧಿಯಲ್ಲಿ ಭಾರತಿ ಏರ್ಟೆಲ್ನ ಆದಾಯ 4.2% ಎಂದರೆ 10,632.2 ಕೋಟಿ ರೂ.ಗೆ ಹೆಚ್ಚಳವಾಗಿದೆ ಮತ್ತು ಜಿಯೋ 7% ನಷ್ಟು ತ್ರೈಮಾಸಿಕ ಬೆಳವಣಿಗೆ ಯನ್ನು ಕಂಡಿದೆ ಮತ್ತು ವೊಡಾಫೋನ್ ಐಡಿಯ 0.1% ನಷ್ಟು ಆದಾಯ ಹೆಚ್ಚಾಗುತ್ತದೆ.

ಅದೇ ರೀತಿ, ಏರ್ಟೆಲ್ ಕಂಪನಿಯು ಮಾರ್ಚ್ ತಿಂಗಳ ತ್ರೈಮಾಸಿಕದಲ್ಲಿ ಆರ್.ಪಿ.ಪಿ. (ಸರಾಸರಿ ಬಳಕೆದಾರರಿಗೆ ಸರಾಸರಿ ಆದಾಯ) ನಲ್ಲಿ 19% ನಷ್ಟು ಹೆಚ್ಚಳವಾಗಿದ್ದು, ಕನಿಷ್ಠ ರೀಚಾರ್ಜ್ ಯೋಜನಾ ಕಾರ್ಯನೀತಿಯಿಂದಾಗಿ ಮಾರ್ಚ್ ನಲ್ಲಿ ಕನಿಷ್ಠ 123 ರೂ.ಗೆ ಇಳಿದಿದೆ.  ಜೊತೆಗೆ ರೂ. 99/149 ಪ್ಯಾಕ್ಗಳ  ಬೆಲೆಯನ್ನು 119 / 169 ಗೆ ಹೆಚ್ಚಿಸರುವುದು ಸಹ ಇದಕ್ಕೆ ಕಾರಣವಾಗಿದೆ.

02 Comments

  • Https://www.youtube.com/channel/UCnZd7cyxWsZsn9Otr6WLUiw/about super bro i am kannada youtuber bro plz shaer my vi plz give your mob number bro

  • I am no longer certain the place you are getting your information, however good topic. I needs to spend a while learning much more or working out more. Thanks for excellent information I used to be searching for this information for my mission.

Leave a comment